ಭೋವಿ ಗುರುಗಳು ಕರೋನಾ ಲಾಕ್‌ಡೌನ್ ಸಮಯದಲ್ಲಿ ಚಿತ್ರದುರ್ಗ ಯೋಜನಾ ಕಾರ್ಯದಲ್ಲಿ ಸಿಲುಕಿರುವ ತೆಲಂಗಾಣ ಮತ್ತು ಮಹಾರಾಷ್ಟ್ರ ವಾಡರ್ ಕಾರ್ಮಿಕರಿಗೆ ಒಂದು ತಿಂಗಳ ಪಡಿತರವನ್ನು ವಿತರಿಸುತ್ತಾರೆ

ಭೋವಿ ಗುರುಗಳು ಕರೋನಾ ಲಾಕ್‌ಡೌನ್ ಸಮಯದಲ್ಲಿ ಚಿತ್ರದುರ್ಗ ಯೋಜನಾ ಕಾರ್ಯದಲ್ಲಿ ಸಿಲುಕಿರುವ ತೆಲಂಗಾಣ ಮತ್ತು ಮಹಾರಾಷ್ಟ್ರ ವಾಡರ್ ಕಾರ್ಮಿಕರಿಗೆ ಒಂದು ತಿಂಗಳ ಪಡಿತರವನ್ನು ವಿತರಿಸುತ್ತಾರೆ

ಗುರು, 16/04/2020 - 08:28
0 comments
ವಲಸೆ ಕಾರ್ಮಿಕರು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮಶ್ವರ ಸ್ವಾಮೀಜಿ ತಿಳಿಸಿದರು. ಕರೋನ ಲಾಕ್‍ಡೌನ್‍ನಿಂದ ಬೇರೆ ರಾಜ್ಯದಿಂದ ಬಂದು ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗಾಗಿರುವ ಆಹಾರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಭೋವಿ ಗುರುಪೀಠವು ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆ ವನಪರ್ತಿ ತಾಲ್ಲೂಕು ರಾಮನಂದಪುರಂ ಗ್ರಾಮದ ಕಾರ್ಮಿಕರು, ಜಿಲ್ಲೆಯ ಲಕ್ಕಿಹಳ್ಳಿ ಮೀಸಲು ಅರಣ್ಯದ ಪಕ್ಕದಲ್ಲಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ 30 ಕುಟುಂಬಗಳು ಹಾಗೂ ಮಹರಾಷ್ಟ್ರದ 5 ಕುಟುಂಬಗಳಿಗೆ ಅಕ್ಕಿ, ಗೋದಿ ಹಿಟ್ಟು, ರಾಗಿ ಹಿಟ್ಟು, ಮೆಣಸಿಕಕಾಯಿ, ಈರಳ್ಳಿ, ಟಮೋಟೊ, ಬೆಳ್ಳುಳ್ಳಿ, ಸೋಪು, ಪೇಸ್ಟ್, ಬ್ರೆಷ್, ಕಾರದಪುಡಿ, ಬೆಳೆ, ಎಣ್ಣೆ, ತೆಂಗಿನ ಕಾಯಿ ಸೇರಿದಂತೆ ನಿತ್ಯ ಆಹಾರ ತಯಾರಿಕೆಗೆ ಅಗತ್ಯವಿರುವ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಆರೋಗ್ಯ ದುಡಿಯುವವರಿಗೆ ತುಂಬಾ ಅಗತ್ಯವಿರುತ್ತದೆ. ಅವರನ್ನು ಅವಲಂಬಿಸಿ ಕುಟುಂಬ ನಿರ್ವಹಣೆ ನಡೆಯುತ್ತಿರುತ್ತದೆ. ಮನೆಯಲ್ಲಿ ದುಡಿಯುವವರನ್ನು ನಂಬಿದ ಅವಲಂಬಿತರು ಬೀದಿಗೆ ಬರುವಂತರಾಗಬಾರದು. ಕೂಲಿಗಾಗಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವಲಸೆ ಹೋದರು ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು. ವರ್ಷದ ಎಲ್ಲಾ ತಿಂಗಳು ವಲಸೆಯಲ್ಲಿಯೇ ಕಳೆಯುವ ಕುಟುಂಬಗಳು ವಿಶೇಷವಾಗಿ ಮಕ್ಕಳ ಶಿಕ್ಷಣಕ್ಕೆ ಸರ್ಕಾರದ ವಸತಿ ನಿಲಯಗಳು ಇಲ್ಲವೇ ವಿವಿಧ ಸಂಘ ಸಂಸ್ಥೆಗಳು ನಡೆಯುವ ವಸತಿ ನಿಲಯಗಳಲ್ಲಿ ಶಿಕ್ಷಣ ಕೊಡಿಸಲು ಪೋಷಕರು ಗಮನವಹಿಸಬೇಕು ಎಂದು ತಿಳಿಸಿದರು. ಡಾ.ಬಿ.ಆರ್.ಅಂಬೇಡ್ಕರ್‍ರವರು ನೀಡಿರುವ ಸಂವಿಧಾನದಿಂದ ಬಡ ಸಮುದಾಯಗಳಿಗೆ ಉಚಿತ ಆರೋಗ್ಯ ಶಿಕ್ಷಣ ಸಿಗುವಂತ ಸಂದರ್ಭದಲ್ಲಿ ಜನತೆ ಸದುಪಯೋಗ ಪಡೆಸುಕೊಳ್ಳಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತ ಸಮಾಜ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ದುಡಿಯುವ ಸಮುದಾಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಕರೋನಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಚಿಸುವಂತಹ ನಿಯಮಗಳನ್ನು ತಪ್ಪದೆ ಪಾಲಿಸಿ ಕರೋನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು. ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಲಕ್ಷ್ಮಣ, ಭೋವಿ ಗುರುಪೀಠದ ಸಿಇಓ ಗೌನಹಳ್ಳಿ ಗೋವಿಂದಪ್ಪ, ಮುಖಂಡರಾದ ಸಂಜೀವಪ್ಪ, ಮೂಡಲಗಿರಿಯಪ್ಪ, ಕೃಷ್ಣಪ್ಪ, ಶ್ರೀನಿವಾಸ್, ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.